ಹೌದು ನನ್ನ ಬ್ಲಾಗನ್ನು ನೋಡದೆ ಎಷ್ಟೋ ದಿನಗಳಾದವು. ಇವತ್ತು ಇನ್ನೊಬ್ಬ ಮಿತ್ರರಿಂದ ಬಂದ ಇಮೇಲ್ ನಲ್ಲಿ ಅವರ ಬ್ಲಾಗ್ ಕೊಂಡಿ ಇತ್ತು. ಅವರು ನನಗೆ ನೋಡಿ ನನ್ನ ಅಭಿಪ್ರಾಯ ತಿಳಿಸಲು ಹೇಳಿದ್ದರು. ಆಗ ನನ್ನ ಬ್ಲಾಗ್ ಕಥೆ ಏನಾಗಿದೆ ಎಂದು ನೋಡಲು ಹೋದೆ. ಮೊದಲು ಒಂದೇ ಒಂದು ಅಕ್ಷರ ತಪ್ಪಾಗಿ ಟೈಪ್ ಮಾಡಿದ್ದಕ್ಕೆ ಒಂದಷ್ಟು ಕಿಡಿಗೇಡಿಗಳು ಧರ್ಮದ ಹೆಸರಲ್ಲಿ ಸೇರಿಸಿಟ್ಟ ತೀಕ್ಷ್ಣ ವಿಚಾರಗಳು ಎದುರಾಗಿ ಒಂದು ಕ್ಷಣ ಎದೆ ಝಲ್ಲ ಎಂದಿತು. ನಂತರ ಪುನಃ ಸರಿಯಾಗಿ ಬರೆದಾಗ ಬಂತು. ಅದರಲ್ಲಿ ೨-೩ ಜನ ಬಿಟ್ಟು ಹೋದ ಅಭಿಪ್ರಾಯಗಳು ಇದ್ದವು. ನಾನು ಅವತ್ತಿನಿಂದ ಇಂದಿನವರೆಗೆ ಅದನ್ನು ತೆಗೆದು ಕೂಡ ನೋಡಿರಲಿಲ್ಲ. ಆಗ ಅನಿಸಿದ್ದು, 'ಕಾಲ ಓಡುತ್ತಲೇ ಇರುತ್ತದೆ ಯಾರ ಅಪ್ಪಣೆಗೂ ಕಾಯದೆಯೇ.ಯಾರ ನೋವಿನ, ನಲಿವಿನ, ಕ್ಷಣಗಳನ್ನು ಧೀರ್ಘವಾಗಿಸದೆಯೇ. ನಾವು ಅದರ ಜೊತೆ ಹೆಜ್ಜೆ ಹಾಕಿ ಬಿಟ್ಟರೆ ಎಷ್ಟು ಚಂದ ' ಅಂತ.ಅದರ ಆಧೀನದಲ್ಲಿರದೆ ಸಮಾನಾಂತರದಲ್ಲಿ ನಡೆದರೆ ಅದು ಜೊತೆಗಾರ,ಅನುಭವಗಳ ಆಗರ ಅಲ್ಲವೇ?ಏನೇ ಬಂದರೂ ಕಾಲನ ಹಿಂದೆ ಉಳಿಯಬಾರದು.ಅದರಿಂದ ನಷ್ಟ ನಮಗೇ.
ಅಲ್ಲಿಂದ ಇಂದಿನವರೆಗೆ ನಾನು ಕನಿಷ್ಠ ವಾರಕ್ಕೊಂದರಂತೆ ಮನಸ್ಸಿನಲ್ಲಿ ಸುತ್ತು ಹೊಡೆಯುವ ವಿಚಾರಗಳನ್ನು ಅಕ್ಷರಗಳಲ್ಲಿ ಹೆಣೆದಿದ್ದರೆ ಇಲ್ಲವೆಂದರೂ ೫೦ ಬೇರೆ ಬೇರೆ ಪುಟಗಳಿರುತ್ತಿದ್ದವು. ನನ್ನನ್ನೇ ನಾನು ಅವಲೋಕಿಸಿಕೊಳ್ಳಲು ಸರಳವಾದ ಕನ್ನಡಿ ಇರುತ್ತಿತ್ತು.ಹೀಗೆ ನಾನು ವ್ಯರ್ಥಯಿಸಿದ ಕಾಲವೇ ಒಂದು ಸಫಲ ಜೀವನ ಆಗಲು ಸಾಧ್ಯವಿತ್ತು.ಬಾರಿ ಬಾರಿ ಇಮೇಲ್ ಚೆಕ್ ಮಾಡುತ್ತಾ,ಒಂದೇ ರೀತಿಯ ಸುದ್ದಿ ಇರುವ ಎಲ್ಲ ಪತ್ರಿಕೆಗಳನ್ನು ಓದುತ್ತ ಹಾಳುಗೆಡಹುವ ಸ್ವಲ್ಪ ಸಮಯವಾದರೂ ಇಂಥ ಆತ್ಮತೃಪ್ತಿಯ, ಸ್ವಾಧ್ಯಯದ ಲಾಭಕ್ಕೆ ಎಡೆ ಮಾಡಿ ಕೊಟ್ಟಿರುತ್ತಿತ್ತು.
Thursday, October 16, 2008
Subscribe to:
Post Comments (Atom)
1 comment:
don't worry... You can be regular now on... Now you know what not to do... good restart i should say!!! :-)
Post a Comment